Widgets Magazine

ಬಾಲಿವುಡ್ ಖಾನ್-ದಾನ್ ಗಳನ್ನೂ ಮೀರಿದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಗುರುವಾರ, 6 ಫೆಬ್ರವರಿ 2020 (09:31 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಳುಗಳಲ್ಲಿ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬ್ರಾಂಡ್ ವಾಲ್ಯೂ ಈಗ ಭಾರತದ ಇತರ ಸೆಲೆಬ್ರಿಟಿಗಳಿಗಿಂತಲೂ ಉನ್ನತ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
 

ಭಾರತೀಯ ಸೆಲೆಬ್ರಿಟಿಗಳ ಬ್ರಾಂಡ್ ವಾಲ್ಯೂ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸತತ ಮೂರನೇ ಬಾರಿಗೆ ಟಾಪ್ 1 ನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ನ ಖ್ಯಾತ ನಟರು, ಇತರ ಕ್ರೀಡಾಳುಗಳನ್ನೂ ಕೊಹ್ಲಿ ಮೀರಿದ್ದಾರೆ.
 
ಈ ವರ್ಷ ಕೊಹ್ಲಿ ಬ್ರಾಂಡ್ ಮೌಲ್ಯದಲ್ಲಿ ಶೇ. 39 ರಷ್ಟು ಏರಿಕೆಯಾಗಿದ್ದು, 237.5 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ದ್ವಿತೀಯ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮೂರನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :