ಲಂಡನ್: ಮದುವೆಯಾದ ಮೇಲೆ ಎಲ್ಲರ ಜೀವನದಲ್ಲಿ ಬದಲಾವಣೆಯಾಗುತ್ತದೆ ಎಂಬ ಮಾತಿದೆ. ಇದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೀವನದಲ್ಲೂ ಆಗಿದೆಯಂತೆ. ಹಾಗಂತ ಸಂದರ್ಶನವೊಂದರಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ. ಹಲವು ಬಾರಿ ಕೊಹ್ಲಿ ವಿಫಲರಾದಾಗಲೆಲ್ಲಾ ಜನ ಪತ್ನಿ ಅನುಷ್ಕಾ ಶರ್ಮಾರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಾರೆ.ಇದೀಗ ನಾನು ವಿವಾಹವಾದ ಮೇಲೆ ನನ್ನ ನಾಯಕತ್ವ ಸುಧಾರಿಸಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಮದುವೆಯಾದ ಮೇಲೆ ನಾಯಕತ್ವ ಸುಧಾರಿಸಿದೆ. ನಾನು ಒಬ್ಬ ವ್ಯಕ್ತಿಯಾಗಿಯೂ ಜವಾಬ್ಧಾರಿಯುತ ವ್ಯಕ್ತಿಯಾದೆ.