ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ ವಿರಾಟ್, ಸೆಹ್ವಾಗ್

ನವದೆಹಲಿ| Krishnaveni K| Last Modified ಸೋಮವಾರ, 5 ಏಪ್ರಿಲ್ 2021 (09:23 IST)
ನವದೆಹಲಿ: ಛತ್ತೀಸ್ ಘಡದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಗೌರವ ಸಲ್ಲಿಸಿದ್ದಾರೆ.

 
ಟ್ವೀಟ್ ಮಾಡುವ ಮೂಲಕ ಭದ್ರತಾ ಸಿಬ್ಬಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಸೆಹ್ವಾಗ್ ‘ನಮ್ಮ ಭದ್ರತಾ ಪಡೆಗಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು’ ಎಂದು ಹೇಳಿದ್ದಾರೆ. ‘ನಮ್ಮ ಹೆಮ್ಮೆಯ ಸೈನಿಕರ ಪ್ರಾಣತ್ಯಾಗದ ವಿಚಾರ ಕೇಳಿಬರುತ್ತಿರುವುದು ಅತ್ಯಂತ ವಿಷಾಧನೀಯ. ಜವಾನರ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
 
ಛತ್ತೀಸ್ ಘಡದ ಸುಕ್ಮಾದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುಕ್ಮಾ-ಬಿಜಾಪುರ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ ಸಿಆರ್ ಪಿಎಫ್, ಡಿಆರ್ ಜಿ, ಕಮಾಂಡೋ ಬೆಟಾಲಿಯನ್ ಗೆ ಸೇರಿದ ಯೋಧರು ಹುತಾತ್ಮರಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :