ನವದೆಹಲಿ: ನಾವು ಐದು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯ ಗೆದ್ದು ಸರಣಿ ಗೆಲುವು ಪಡೆದಿರಬಹುದು. ಇಷ್ಟಕ್ಕೇ ಕತೆ ಮುಗಿದಿಲ್ಲ ಎಂದು ವಿರಾಟ್ ಕೊಹ್ಲಿ ಎದುರಾಳಿ ನಾಯಕನಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ ಯಾಕೆ ಹೀಗೊಂದು ಸಂದೇಶ ರವಾನಿಸಿದರು ಗೊತ್ತಾ? ಮತ್ತೆ ಸ್ಟೀವ್ ಸ್ಮಿತ್ ಜತೆ ಜಗಳ ಕಾಯುವ ಪ್ಲ್ಯಾನ್ ಏನಾದ್ರೂ ಇದ್ಯಾ ಎಂದು ಅನುಮಾನಿಸಬೇಡಿ.ಅಸಲಿಗೆ ಕೊಹ್ಲಿ ಹೀಗೆ ಹೇಳಿದ್ದು, ಮುಂದಿನ ಪಂದ್ಯವನ್ನೂ ಮೊದಲಿನಷ್ಟೇ ಮಹತ್ವ ತೆಗೆದುಕೊಂಡು ಆಡುತ್ತೇವೆ