ಆರ್ ಸಿಬಿ ಸೋಲಿನ ಬಳಿಕ ಮ್ಯಾಚ್ ರೆಫರಿ ರೂಂಗೆ ನುಗ್ಗಿ ಕೂಗಾಡಿದ ವಿರಾಟ್ ಕೊಹ್ಲಿ! ಇದೀಗ ಶಿಸ್ತು ಕ್ರಮದ ಭೀತಿ

ಬೆಂಗಳೂರು, ಶನಿವಾರ, 30 ಮಾರ್ಚ್ 2019 (08:38 IST)

ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಅಂಪಾಯರ್ ಗಳ ಪ್ರಮಾದದಿಂದ ನೋ ಬಾಲ್ ಘೋಷಿಸದೇ ಆರ್ ಸಿಬಿ ಸೋಲಿಗೆ ಕಾರಣವಾಗಿದ್ದು ನಾಯಕ ವಿರಾಟ್ ಕೊಹ್ಲಿ ಪಿತ್ತ ನೆತ್ತಿಗೇರಿಸಿದೆ.


 
ಪಂದ್ಯದ ಬಳಿಕ ನೇರವಾಗಿ ಮ್ಯಾಚ್ ರೆಫರಿ ಕೊಠಡಿಗೆ ನುಗ್ಗಿದ ಕೊಹ್ಲಿ ಬಾಯಿಗೆ ಬಂದಂತೆ ರೆಫರಿ ವಿರುದ್ಧ ಕೂಗಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೊಹ್ಲಿ ತನ್ನ ಮೇಲೆ ಶಿಸ್ತು ಕ್ರಮ ಕೈಗೊಂಡರೂ ಪರವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
 
ವಿರಾಟ್ ಕೊಹ್ಲಿ ಈ ರೀತಿ ಮಾಡಿದ್ದು ನಿಜವೇ ಆಗಿದ್ದರೆ ಅದು ಆರ್ ಸಿಬಿ ಮತ್ತು ಅವರ ಮೇಲೆ ಪರಿಣಾಮ ಬೀರಲಿದೆ. ಕೊಹ್ಲಿಯ ವರ್ತನೆಗೆ ಅವರ ವಿರುದ್ಧ ಶಿಸ್ತು ಕ್ರಮ ಅಥವಾ ಆರ್ ಸಿಬಿ ಅಂಕ ಕಳೆದುಕೊಳ್ಳುವ ಸಾಧ್ಯತೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಊಟಕ್ಕಿಲ್ಲದ ಉಪ್ಪಿನಕಾಯಿ ಆಯ್ತು ಸಂಜು ಸ್ಯಾಮ್ಸನ್ ಶತಕ

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ...

news

ನಾವೇನು ಐಪಿಎಲ್ ಆಡ್ತಿದ್ದೀವಾ, ಗಲ್ಲಿ ಕ್ರಿಕೆಟ್ ಆಡ್ತಿದ್ದೀವಾ? ಸಿಟ್ಟಿಗೆದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ

ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ...

news

ನನ್ನ ಕ್ಯಾರೆಕ್ಟರ್ ಬಗ್ಗೆಯೇ ನನಗೆ ಡೌಟು ಶುರುವಾಗಿತ್ತು ಎಂದು ಕೆಎಲ್ ರಾಹುಲ್

ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ನಿಷೇಧ ...

news

ಯಾರು ಬೆಂಬಲಿಸಿದ್ದರೇನಂತೆ ಮಂಕಡ್ ಔಟ್ ಮಾಡಿದ್ದಕ್ಕೆ ಆರ್. ಅಶ್ವಿನ್ ಗೆ ಸಿಕ್ಕಿತು ರಾಹುಲ್ ದ್ರಾವಿಡ್ ಸಪೋರ್ಟ್!

ಮುಂಬೈ: ಐಪಿಎಲ್ ನ ಮೊದಲ ಪಂದ್ಯದಲ್ಲೇ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ...