ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಷ್ಟು ಜನಪ್ರಿಯ ಎಂದರೆ ಇದೀಗ ಸಾಮಾಜಿಕ ಜಾಲತಾಣದಲ್ಲೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರನ್ನೇ ಹಿಂದಿಕ್ಕಿದ್ದಾರೆ.ಇನ್ ಸ್ಟಾಗ್ರಾಂನಲ್ಲಿ ಕೊಹ್ಲಿ ಆಗಾಗ ತಮ್ಮ ವೈಯಕ್ತಿಕ ಜೀವನದ ಅಪರೂಪದ ಕ್ಷಣಗಳ ಫೋಟೋ ಹಾಕುತ್ತಾ ಭಾರೀ ಲೈಕ್ಸ್ ಪಡೆಯುತ್ತಾರೆ. ಇದೀಗ ಕೊಹ್ಲಿ ಇನ್ ಸ್ಟಾಗ್ರಾಂ ಜನಪ್ರಿಯತೆಯಲ್ಲಿ ಅಮಿತಾಬ್ ಬಚ್ಚನ್ ರನ್ನೂ ಹಿಂದಿಕ್ಕಿದ್ದಾರೆ.ಕೊಹ್ಲಿ ಇನ್ ಸ್ಟಾಗ್ರಾಂ ಫಾಲೋವರ್ ಗಳ ಸಂಖ್ಯೆಯಲ್ಲಿ ಬಿಗ್ ಬಿಗಿಂತ ಮುಂದೆ ಬಂದಿದ್ದಾರೆ.