ಪತ್ನಿ ಅನುಷ್ಕಾ ಶರ್ಮಾರನ್ನು ಟೀಕಿಸಿದ್ದಕ್ಕೆ ಮಾಜಿ ಕ್ರಿಕೆಟಿಗ ಎಂಜಿನಿಯರ್ ವಿರುದ್ಧ ಕೊಹ್ಲಿ ಸಿಟ್ಟು

ಮುಂಬೈ, ಸೋಮವಾರ, 2 ಡಿಸೆಂಬರ್ 2019 (09:49 IST)

ಮುಂಬೈ: ಇತ್ತೀಚೆಗಷ್ಟೇ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾ ಆದೇಶದಂತೆ ನಡೆದುಕೊಳ್ಳುತ್ತಾರೆ ಎಂದು ಮಾಜಿ ಕ್ರಿಕೆಟಿಗ ಫಾರುಖ್ ಎಂಜಿನಿಯರ್ ಆರೋಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆ ವಿಚಾರಕ್ಕೆ ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟನ್ನೂ ಕೊಟ್ಟಿದ್ದರು.


 
ಇದೀಗ ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಮೇಲೆ ವಿನಾಕಾರಣ ಆರೋಪ ಮಾಡಿದ ಎಂಜಿನಿಯರ್ ವಿರುದ್ಧ ಕಿಡಿ ಕಾರಿದ್ದಾರೆ. ಈ ಮೂಲಕ ದೀರ್ಘಕಾಲದ ನಂತರ ಪತ್ನಿಯ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 
ನಿಮಗೆ ಆಯ್ಕೆ ಸಮಿತಿ ಮೇಲೆ ಏನಾದರೂ ಅಸಮಾಧಾನಗಳಿದ್ದರೆ ಏನು ಬೇಕಾದರೂ ಹೇಳಿಕೊಳ‍್ಳಿ. ಆದರೆ ಅದರಲ್ಲಿ ವಿನಾಕಾರಣ ಅನುಷ್ಕಾ ಹೆಸರನ್ನು ಯಾಕೆ ಎಳೆದು ತರುತ್ತೀರಿ. ನಟಿಯಾಗಿರುವ ಅನುಷ್ಕಾ ಹೆಸರನ್ನು ಪ್ರಸ್ತಾಪಿಸುವುದು ಸುಲಭ. ಇದರಿಂದ ಬೇಗ ಎಲ್ಲರ ಗಮನ ಸೆಳೆಯಬಹುದು. ಈ ರೀತಿಯ ಟೀಕೆಗಳ ಹಿಂದಿನ ಉದ್ದೇಶವೇ ಇದು ಎಂದು ಕೊಹ್ಲಿ ನೇರವಾಗಿಯೇ ಕೆಂಡಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಿರಿಯನಾದರೂ ತಂಡದಲ್ಲಿ ಟೀಂ ಇಂಡಿಯಾದಲ್ಲಿ ಹೆಚ್ಚು ತಮಾಷೆಗೊಳಗಾಗುವ ಆಟಗಾರ ಯಾರು ಗೊತ್ತೇ?

ಮುಂಬೈ: ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರ ಸಾಲಿಗೆ ಇಶಾಂತ್ ಶರ್ಮಾ ಕೂಡಾ ಸೇರ್ಪಡೆಯಾಗುತ್ತಾರೆ. ಆದರೆ ...

news

ದೇಶೀಯ ಟಿ20 ಕ್ರಿಕೆಟ್ ಗೆ ಕರ್ನಾಟಕವೇ ಸುಲ್ತಾನ್

ಸೂರತ್: ಸತತ ಎರಡನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ...

news

ರಾಹುಲ್ ದ್ರಾವಿಡ್ ಗೆ ಅಂದು ತಟ್ಟಿದ್ದ ಬಿಸಿ ಇಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಗೂ ಆಯ್ತು!

ಅಡಿಲೇಡ್: ಪಾಕಿಸ್ತಾನದ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಆಡುತ್ತಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ ...

news

ಸೈಯದ್ ಮುಷ್ತಾಕ್ ಟೂರ್ನಿ: ಕರ್ನಾಟಕ/ತಮಿಳುನಾಡು ಫೈನಲ್ ಇಂದು

ಸೂರತ್: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂದು ಕರ್ನಾಟಕ ತಮಿಳುನಾಡು ತಂಡವನ್ನು ...