Widgets Magazine

ಅನುಷ್ಕಾ ಸಿನಿಮಾ ಸೆಟ್ ಗೆ ಬಂದು ನಿದ್ದೆ ಮಾಡಿದ್ದ ವಿರಾಟ್ ಕೊಹ್ಲಿ!

ಮುಂಬೈ| Krishnaveni K| Last Modified ಸೋಮವಾರ, 18 ಮೇ 2020 (10:00 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಭಾರತದ ಖ್ಯಾತ ಫುಟ್ಬಾಲಿಗ ಸುನಲ್ ಛೆಟ್ರಿ ಜತೆಗಿನ ಇನ್ ಸ್ಟಾಗ್ರಾಂ ಲೈವ್ ವೇಳೆ ಸ್ವಾರಸ್ಯಕರ ಘಟನೆಯನ್ನು ಮೆಲುಕು ಹಾಕಿದ್ದಾರೆ.

 
ಸುನಿಲ್ ಛೆಟ್ರಿ ಕೊಹ್ಲಿಗೆ ಅನುಷ್ಕಾ ನಿಮ್ಮ ಪಂದ್ಯವಿದ್ದಾಗ ಮೈದಾನಕ್ಕೆ ಬಂದು ತುಂಬಾ ಬೆಂಬಲಿಸುತ್ತಾರೆ. ಆದರೆ ನೀವು ಅವರ ಸೆಟ್ ಗೆ ಬಂದು ಆವತ್ತೊಮ್ಮೆ ನಿದ್ರೆ ಹೋಗಿದ್ದಿರಿ ಎಂದು ಹಳೆಯ ಘಟನೆಯನ್ನು ನೆನೆಪಿಸುತ್ತಾರೆ.
 
ಆಗ ಆ ಘಟನೆ ಬಗ್ಗೆ ಕೊಹ್ಲಿ ವಿವರಿಸಿದ್ದು ‘ನನಗೆ ಪ್ರಯಾಣ ಮಾಡಿದ ಬಳಿಕ ಚೆನ್ನಾಗಿ ನಿದ್ರೆ ಮಾಡಬೇಕೆನಿಸುತ್ತದೆ. ಆವತ್ತು ಅನುಷ್ಕಾಳನ್ನು ನೋಡಬೇಕೆಂದು ಸಿನಿಮಾ ಸೆಟ್ ಗೆ ಹೋದಾಗ ಅಲ್ಲಿ ಹತ್ತಿರ ಎಲ್ಲೂ ಹೋಟೆಲ್ ರೂಂ ಸಿಗಲಿಲ್ಲ. ಹೀಗಾಗಿ ಸೆಟ್ ನಲ್ಲೇ ನಿದ್ರೆ ಮಾಡಿದ್ದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
 
ಇನ್ನೊಂದು ಬಾರಿ ಭೂತಾನ್ ಗೆ ಪ್ರವಾಸ ಹೋಗಿದ್ದಾಗ ಸೈಕಲಿಂಗ್ ಮಾಡುವ ಭರದಲ್ಲಿ ಅನುಷ್ಕಾರನ್ನು ಬಿಟ್ಟು ಕೊಹ್ಲಿ ತುಂಬಾ ದೂರ ಹೋಗಿಬಿಟ್ಟಿದ್ದರಂತೆ. ಸ್ವಲ್ಪ ಹೊತ್ತು ಕಳೆದ ಮೇಲೆ ಅನುಷ್ಕಾ ಇಲ್ಲದಿದ್ದು ನೋಡಿ ವಾಪಸ್ ಯು ಟರ್ನ್ ಪಡೆದು ಹಿಂದಕ್ಕೆ ಬಂದರಂತೆ. ಆದರೆ ಅನುಷ್ಕಾಗೆ ಎಷ್ಟು ಸಿಟ್ಟು ಬಂದಿತ್ತೆಂದರೆ ಕೊಹ್ಲಿ ಎಷ್ಟೇ ಕೂಗಿದರೂ ಯಾರು ಎಂದೇ ಪರಿಚಯವಿಲ್ಲದವರಂತೆ ಮುಖ ಮಾಡಿದ್ದರಂತೆ. ಅಷ್ಟೇ ಅಲ್ಲ, ಕೊಹ್ಲಿ ಎಷ್ಟೇ ಸಾರಿ ಎಂದು ಕೇಳಿದರೂ ಅನುಷ್ಕಾ ತಿರುಗಿಯೂ ನೋಡಲಿಲ್ಲವಂತೆ!
ಇದರಲ್ಲಿ ಇನ್ನಷ್ಟು ಓದಿ :