ಐಪಿಎಲ್ ರದ್ದಾದ ಬೆನ್ನಲ್ಲೇ ಕೊರೋನಾ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಗುರುವಾರ, 6 ಮೇ 2021 (09:55 IST)
ಮುಂಬೈ: ಐಪಿಎಲ್ 14 ಕೊರೋನಾ ಕಾರಣದಿಂದ ರದ್ದಾದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
 > ಇತ್ತೀಚೆಗಷ್ಟೇ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸದ್ಯದಲ್ಲೇ ನಾವು ಕೊರೋನಾ ವಿರುದ್ಧ  ಪರಿಹಾರ ಕಾರ್ಯಕ್ಕೆ ಹೊಸ ಯೋಜನೆಯೊಂದನ್ನು ಹೊರತರಲಿದ್ದೇವೆ. ಇದರ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದಿದ್ದರು.>   ಇದೀಗ ಐಪಿಎಲ್ ರದ್ದಾದ ಬೆನ್ನಲ್ಲೇ ತಮ್ಮ ಮುಂಬೈ ನಿವಾಸಕ್ಕೆ ಆಗಮಿಸಿರುವ ಕೊಹ್ಲಿ ಯುವ ಸೇನಾ ಸಂಘದ ಸದಸ್ಯ ರಾಹುಲ್ ಎನ್ ಕನಾಲ್ ಜೊತೆ ಮಾತುಕತೆ ನಡೆಸಿದ್ದಾರೆ. ಕೊರೋನಾ ಪರಿಹಾರಕ್ಕೆ ತಾವು ಯಾರ ರೀತಿ ತೊಡಗಿಸಿಕೊಳ್ಳಬಹುದು ಎಂದು ಚರ್ಚೆ ನಡೆಸಿದ್ದಾರೆ. ಸದ್ಯದಲ್ಲೇ ಕೊಹ್ಲಿಯ ಯೋಜನೆ ಏನೆಂಬುದು ಹೊರಬೀಳಲಿದೆ.ಇದರಲ್ಲಿ ಇನ್ನಷ್ಟು ಓದಿ :