ಪ್ರಧಾನಿ ಮೋದಿಯ 21 ದಿನಗಳ ಕರ್ಫ್ಯೂ ಆದೇಶಕ್ಕೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?

ಮುಂಬೈ| Krishnaveni K| Last Modified ಬುಧವಾರ, 25 ಮಾರ್ಚ್ 2020 (09:51 IST)
ಮುಂಬೈ: ಕೊರೋನಾವೈರಸ್ ಹರಡದಂತೆ ತಡೆಯಲು ಪ್ರಧಾನಿ ಮೋದಿ ಮುಂದಿನ 21 ದಿನಗಳ ಕಾಲ ದೇಶವಿಡೀ ಲಾಕ್ ಡೌನ್ ಮಾಡಲು ಆದೇಶ ನೀಡಿರುವುದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆಂಬಲ ಸೂಚಿಸಿದ್ದಾರೆ.

 
ಕೊರೋನಾ ತಡೆಯಲು 21 ದಿನಗಳ ಕಾಲ ಲಾಕ್ ಡೌನ್ ಮಾಡದೇ ಬೇರೆ ದಾರಿಯಿಲ್ಲ ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿದ್ದರು. ಇದನ್ನು ಹಲವು ಸೆಲೆಬ್ರಿಟಿಗಳು ಬೆಂಬಲಿಸಿ ಮನೆಯಲ್ಲೇ ಇರುವಂತೆ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಸಂದೇಶ ಬರೆದಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ‘ಪ್ರಧಾನಿ ಮೋದಿ ಈಗಷ್ಟೇ ಘೋಷಿಸಿರುವಂತೆ ಮುಂದಿನ 21 ದಿನಗಳ ಕಾಲ ದೇಶ ಲಾಕ್ ಡೌನ್ ಸ್ಥಿತಿಯಲ್ಲಿರಲಿದೆ. ನನ್ನ ಮನವಿಯೂ ಇದೇ ಆಗಿದ್ದು, ಮನೆಯಲ್ಲೇ ಸುರಕ್ಷಿತವಾಗಿರಿ. ಕೊರೋನಾ ದೂರ ಮಾಡಲು ಸೋಷಿಯಲ್ ಡಿಸ್ಟೇನ್ಸ್ ಒಂದೇ ದಾರಿ’ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :