ಲಂಡನ್: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ಬರ್ಮಿಂಗ್ ಹ್ಯಾಮ್ ನಲ್ಲಿ ಪಂದ್ಯ ನಡೆಯುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ 87 ವರ್ಷದ ಅಜ್ಜಿ ಎಲ್ಲರ ಗಮನಸೆಳೆಯುತ್ತಿದ್ದರು. ಈ ಅಜ್ಜಿಯ ಹೆಸರು ಚಾರುಲತಾ ಪಟೇಲ್ ಎನ್ನಲಾಗಿದೆ. ಈ 87 ವರ್ಷದ ಅಜ್ಜಿ ಪಂದ್ಯದುದ್ದಕ್ಕೂ ಪೀಪಿ ಊದುತ್ತಾ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಈ ಅಜ್ಜಿಯನ್ನು ಆಗಾಗ ಕ್ಯಾಮರಾ ಕಣ್ಣುಗಳು ಸೆರೆಹಿಡಿಯುತ್ತಿತ್ತು.ಈ ಅಜ್ಜಿಯ ಉತ್ಸಾಹ ಕಂಡು ಟೀಂ ಇಂಡಿಯಾ ನಾಯಕ ವಿರಾಟ್