ಧೋನಿ ದಾಖಲೆ ಮುರಿಯಲು ಸಜ್ಜಾದ ಕ್ಯಾಪ್ಟನ್ ಕೊಹ್ಲಿ

ಅಹಮ್ಮದಾಬಾದ್| Krishnaveni K| Last Modified ಬುಧವಾರ, 24 ಫೆಬ್ರವರಿ 2021 (09:56 IST)
ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

 
ಈ ಟೆಸ್ಟ್ ಪಂದ್ಯವನ್ನು ಗೆದ್ದರೆ ಕೊಹ್ಲಿ ತವರಿನಲ್ಲಿ ನಾಯಕನಾಗಿ ಅತೀ ಹೆಚ್ಚು ಟೆಸ್ಟ್ ಗೆಲುವು ಕಂಡ ಧೋನಿ ದಾಖಲೆಯನ್ನು ಮುರಿಯಲಿದ್ದಾರೆ. ಧೋನಿ ಹಾಗೂ ಕೊಹ್ಲಿ ಜಂಟಿಯಾಗಿ 21 ಗೆಲುವು ಕಂಡು ಈ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಇದೀಗ ಕೊಹ್ಲಿಗೆ ಈ ದಾಖಲೆ ಮುರಿದು ಯಶಸ್ವೀ ನಾಯಕನೆನಿಸಿಕೊಳ್ಳುವ ಯೋಗ ಕೂಡಿಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :