ವೋಟಿಂಗ್ ಗೊಂದಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ

ನವದೆಹಲಿ| Krishnaveni K| Last Modified ಸೋಮವಾರ, 29 ಏಪ್ರಿಲ್ 2019 (08:23 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮುಂಬೈಯಲ್ಲಿ ಈ ಬಾರಿ ವೋಟ್ ಮಾಡುವ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಅವರು ವೋಟ್ ಮಾಡದೇ ಇರುತ್ತಾರಾ ಎಂಬ ಗೊಂದಲವಿತ್ತು. ಆದರೆ ಅದಕ್ಕೆಲ್ಲಾ ಈಗ ತೆರೆ ಎಳೆದಿದ್ದಾರೆ.

 
ಇಂದು ಮುಂಬೈ ವಲಯದಲ್ಲಿ ಮತದಾನ ನಡೆಯುತ್ತಿದ್ದು, ಇಲ್ಲಿಗೆ ತಮ್ಮ ವೋಟ್ ವರ್ಗಾಯಿಸಲು ಯತ್ನಿಸಿದರೂ ಡೆಡ್ ಲೈನ್ ಮುಗಿದ ಕಾರಣ ಸಾಧ್ಯವಾಗಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿಗೆ ವೋಟ್ ಮಾಡಲು ಸಾಧ‍್ಯವಿಲ್ಲ ಎಂದೇ ಸುದ್ದಿಹಬ್ಬಿತ್ತು.
 
ಆದರೆ ಇದೀಗ ಸ್ವತಃ ವಿರಾಟ್ ಕೊಹ್ಲಿ ತಮ್ಮ ವೋಟಿಂಗ್ ಗೊಂದಲಗಳಿಗೆ ತೆರೆ ಎಳೆದಿದ್ದು ಮೇ 12 ರಂದು ಗುರ್ ಗಾಂವ್ ನಲ್ಲಿ ತಾವು ವೋಟ್ ಮಾಡುತ್ತಿರುವುದಾಗಿ ವೋಟರ್ ಐಡಿ ಸಮೇತ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ತಮ್ಮ ವೋಟಿಂಗ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :