ಮುಂಬೈ: ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯ ಜತೆ ನಡೆದ ಸಂಘರ್ಷದಲ್ಲಿ ಹುತಾತ್ಮ ಯೋಧರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೌರವ ಸಮರ್ಪಿಸಿದ್ದಾರೆ.ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿರುವ ಕೊಹ್ಲಿ ನಿಮ್ಮಷ್ಟು ಧೈರ್ಯವಂತರು, ನಿಸ್ವಾರ್ಥಿಗಳು ಯಾರೂ ಇಲ್ಲ ಎಂದು ಕೊಂಡಾಡಿದ್ದಾರೆ.ನಮ್ಮ ದೇಶವನ್ನು ರಕ್ಷಿಸಲು ಗ್ಯಾಲ್ವಾನ್ ಕಣಿವೆಯಲ್ಲಿ ಪ್ರಾಣ ತೆತ್ತ ಯೋಧರಿಗೆ ನನ್ನ ಸೆಲ್ಯೂಟ್. ನಿಮ್ಮಷ್ಟು ಸಾಹಸಿಗಳು, ನಿಸ್ವಾರ್ಥಿಗಳು ಇನ್ನೊಬ್ಬರಿಲ್ಲ. ಹುತಾತ್ಮರ ಕುಟುಂಬಗಳಿಗೆ ಸಂತಾಪಗಳು. ನಮ್ಮ ಪ್ರಾರ್ಥನೆಗಳ ಮೂಲಕ ಅವರಿಗೆ ಧೈರ್ಯ ಸಿಗಲಿ,