ಮೊಹಮ್ಮದ್ ಸಿರಾಜ್ ರನ್ನು ಆಡುವ ಬಳಗಕ್ಕೆ ಸೇರಿಸಲು ಕೊಹ್ಲಿ ಶತಾಯ ಗತಾಯ ಪ್ರಯತ್ನ

ಸೌಥಾಂಪ್ಟನ್| Krishnaveni K| Last Modified ಶುಕ್ರವಾರ, 11 ಜೂನ್ 2021 (09:03 IST)
ಸೌಥಾಂಪ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಯುವ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಅಪಾರ ಭರವಸೆ. ಹೀಗಾಗಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲೂ ಈ ಯುವ ವೇಗಿಯನ್ನು ಆಡಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
 

ಆದರೆ ಸಿರಾಜ್ ರನ್ನು ಆಡುವ ಬಳಗದಲ್ಲಿ ಸೇರಿಸಲು ಅನುಭವಿ ಆಟಗಾರರೊಬ್ಬರಿಗೆ ಕೊಕ್ ನೀಡಲೇಬೇಕು. ಸದ್ಯಕ್ಕೆ ವೇಗಿಗಳಾಗಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಇದ್ದಾರೆ. ಸಿರಾಜ್ ರನ್ನು ತಂಡದಲ್ಲಿ ಸೇರ್ಪಡೆಗೊಳಿಸಲು ಕೊಹ್ಲಿ ಇವರಲ್ಲಿ ಯಾರಾದರೂ ಒಬ್ಬರಿಗೆ ಕೊಕ್ ನೀಡಬೇಕಾಗುತ್ತದೆ.
 
ಮೊಹಮ್ಮದ್ ಶಮಿ ಜೊತೆಗೆ ಸಿರಾಜ್ ರನ್ನು ಆರಂಭಿಕ ಬೌಲರ್ ಗಳಾಗಿ ಬಳಸುವ ಇರಾದೆ ಕೊಹ್ಲಿಯದ್ದು. ಬುಮ್ರಾರನ್ನು ತಂಡದಿಂದ ಹೊರಗಿಡುವ ಧೈರ್ಯ ಖಂಡಿತಾ ಕೊಹ್ಲಿ ಮಾಡಲ್ಲ. ಹಾಗಿದ್ದರೆ ಅನುಭವಿ ಇಶಾಂತ್ ರನ್ನು ಹೊರಗಿಡುವ ಕಠಿಣ ನಿರ್ಧಾರ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :