ಲಂಡನ್: ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಪ್ರಯಾಸಕರ ಗೆಲುವು ದಾಖಲಿಸಿದ ಬಳಿಕ ಇದೊಂದು ಅದ್ಭುತ ಗೆಲುವಾಗಿತ್ತು ಎಂದು ಟ್ವೀಟ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೊಹ್ಲಿ ಬಳಗ ಬಳಿಕ 11 ರನ್ ಗಳಿಂದ ಪ್ರಯಾಸಕರ ಗೆಲುವು ಸಾಧಿಸಿತ್ತು. ಅದೂ ಕೊನೆಯ ಓವರ್ ನಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರಿಂದ ಗೆಲುವು ಸಾಧ್ಯವಾಗಿತ್ತು. ಈ ಗೆಲುವಿನ