Widgets Magazine

ಹಳೆಯ ಎದುರಾಳಿಯಿಂದ ವಿರಾಟ್ ಕೊಹ್ಲಿಗೆ ಹೊಸ ಸವಾಲು

ಮುಂಬೈ| Krishnaveni K| Last Modified ಭಾನುವಾರ, 8 ಸೆಪ್ಟಂಬರ್ 2019 (07:08 IST)
ಮುಂಬೈ: ಸಮಕಾಲೀನ ಕ್ರಿಕೆಟಿಗರ ಪೈಕಿ ಈಗ ಜಾಗತಿಕವಾಗಿ ಕ್ರಿಕೆಟ್ ಲೋಕದಲ್ಲಿ ಇಬ್ಬರು ಸರಿಸಮಾನ ಸ್ಪರ್ಧಿಗಳು ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್.

 
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಕೊಹ್ಲಿ ಇಬ್ಬರೂ ಬ್ಯಾಟಿಂಗ್ ನಲ್ಲಿ ಒಬ್ಬರಿಗೊಬ್ಬರು ಪೈಪೋಟಿ ಒಡ್ಡುತ್ತಿದ್ದರು. ಆದರೆ ಸ್ಮಿತ್ ಬಾಲ್ ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾದ ಬಳಿಕ ಕೊಹ್ಲಿ ಏಕಮೇವ ಚಕ್ರಾಧಿಪತಿ ಆದರು.
 
ಆದರೆ ಈಗ ಸ್ಮಿತ್ ಮರಳಿ ಬಂದಿದ್ದು, ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಸವಾಲೊಡ್ಡುತ್ತಿದ್ದಾರೆ. ವಿರಾಟ್ ಕೊಹ್ಲಿಯ 25 ಟೆಸ್ಟ್ ಶತಕಗಳ ದಾಖಲೆ ಹಿಂದಿಕ್ಕಿರುವ ಸ್ಮಿತ್ ಐಸಿಸಿ ರ್ಯಾಂಕಿಂಗ್ ನಲ್ಲೂ ಕೊಹ್ಲಿಯನ್ನು ಕೆಳಗಿಳಿಸಿ ತಾವು ನಂ. 1 ಆಗಿದ್ದಾರೆ. ಇದುವರೆಗೆ ಕೊಹ್ಲಿಯನ್ನು ಸಚಿನ್ ಗೆ ಕಂಪೇರ್ ಮಾಡುತ್ತಿದ್ದವರು ಈಗ ಸ್ಮಿತ್ ಜತೆಗೆ ಹೋಲಿಕೆ ಮಾಡಲು ಶುರು ಮಾಡಿದ್ದಾರೆ. ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್ ಆದರೆ ಟೆಸ್ಟ್ ಮಾದರಿಯಲ್ಲಿ ಸ್ಮಿತ್ ಶ್ರೇಷ್ಠ ಎನ್ನುತ್ತಿದ್ದಾರೆ.
 
ಕೊಹ್ಲಿ ಮಾಡುವಂತಹ ಸಾಮಾನ್ಯ ಎಲ್ಲಾ ದಾಖಲೆಗಳನ್ನೂ ಸ್ಮಿತ್ ಕೂಡಾ ಮಾಡಬಲ್ಲರು. ಆದರೆ ದ್ವಿಶತಕ ವಿಚಾರದಲ್ಲಿ ಕೊಹ್ಲಿ 6 ದ್ವಿಶತಕ ಹೊಂದಿದ್ದರೆ ಸ್ಮಿತ್ ಇನ್ನೂ 3 ರಲ್ಲಿದ್ದಾರೆ. ಅದನ್ನು ಹೊರತುಪಡಿಸಿದರೆ ಶತಕಗಳ ಪಟ್ಟಿಯಲ್ಲಿ ಕೊಹ್ಲಿಯನ್ನೂ ಮೀರಿಸುವ ಸಾಮರ್ಥ್ಯವಿರುವುದು ಸ್ಮಿತ್ ಗೆ ಮಾತ್ರ. ಹೀಗಾಗಿ ಇಬ್ಬರ ನಡುವಿನ ಪೈಪೋಟಿ ಈಗ ಕ್ರಿಕೆಟ್ ಜಗತ್ತಿನ ಕುತೂಹಲವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :