ಪೋರ್ಟ್ ಎಲಿಜಬೆತ್: ಏಕದಿನ ಸರಣಿ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ಗೆಲುವಿನಿಂದ ಮೈ ಮರೆಯದೆ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ! ಭಾರತ ಈಗಾಗಲೇ ಸರಣಿಯಲ್ಲಿ 4-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಮುಂದಿನ ಏಕೈಕ ಪಂದ್ಯದ ಫಲಿತಾಂಶ ಸರಣಿ ಗೆಲುವಿನ ಮೇಲೆ ಪರಿಣಾಮ ಬೀರದು.ಹಾಗಾಗಿ ಕೊಹ್ಲಿ ಮುಂದಿನ ಪಂದ್ಯವನ್ನು ಔಪಚಾರಿಕವೆಂದು ಪರಿಗಣಿಸಿ ಹಗುರವಾಗಿ ಕಾಣಬಹುದು ಎಂದು ಎದುರಾಳಿಗಳು ಲೆಕ್ಕಾಚಾರ ಹಾಕಿದ್ದರೆ ತಪ್ಪಾಗಬಹುದು. ನಾವು 5-1 ಅಂತರದಿಂದ ಸರಣಿ ಗೆಲ್ಲಲು ಇಷ್ಟಪಡುತ್ತೇವೆ.