ನಾನು ಬಳಸದ ವಸ್ತುಗಳನ್ನು ಪ್ರಚಾರ ಮಾಡಲ್ಲ ಎಂದ ವಿರಾಟ್ ಕೊಹ್ಲಿ

ನವದೆಹಲಿ| Krishnaveni| Last Modified ಭಾನುವಾರ, 12 ನವೆಂಬರ್ 2017 (08:22 IST)
ನವದೆಹಲಿ: ನಾನು ಬಳಕೆ ಮಾಡದ ವಸ್ತುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಬಳಿ ನೀವೂ ಬಳಸಿ ಎಂದು ಪ್ರಚಾರ ಮಾಡಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
 
ಹಿಂದೊಮ್ಮೆ ಆರೋಗ್ಯಕ್ಕೆ ಉತ್ತಮವಲ್ಲದ ಕೂಲ್ ಡ್ರಿಂಕ್ಸ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದಿದ್ದರು. ಇದೀಗ ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.
 
ಪೆಪ್ಸಿ ಜತೆ ಒಪ್ಪಂದ ಕಡಿದುಕೊಂಡಿದ್ದರ ಬಗ್ಗೆ ಮಾತನಾಡುತ್ತಾ ಕೊಹ್ಲಿ ‘ನಾನು ಬಳಸದ ಉತ್ಪನ್ನಗಳು ಎಷ್ಟೇ ದೊಡ್ಡ ಸಂಸ್ಥೆಯದಾಗಿದ್ದರೂ, ಇನ್ನು ಮುಂದೆ ಜಾಹೀರಾತು ನೀಡಲ್ಲ. ಅಂತಹ ಸಂಸ್ಥೆಗೆ ಒಪ್ಪಿಗೆ ನೀಡುವ ಯಾವುದೇ ಅಗತ್ಯ ನನಗೆ ಕಾಣಿಸುತ್ತಿಲ್ಲ’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :