ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಗೆ ಮುನ್ನ ಭರ್ಜರಿ ವರ್ಕೌಟ್ ನಡೆಸಿದ್ದಾರೆ.ವರ್ಕೌಟ್ ವೇಳೆ ವೈಟ್ ಲಿಫ್ಟಿಂಗ್ ಮಾಡಿ ದೇಹ ಹುರಿಗೊಳಿಸುತ್ತಿರುವ ವಿಡಿಯೋವನ್ನು ಕೊಹ್ಲಿ ಟ್ವೀಟ್ ಮಾಡಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.ಅದರಲ್ಲೂ ಹೆಚ್ಚಿನವರು ಮುಂದಿನ ಬಾರಿ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ವೈಟ್ ಲಿಫ್ಟಿಂಗ್ ಮಾಡಿ. ಪಕ್ಕಾ ಗೋಲ್ಡ್ ಮೆಡಲ್ ನಮ್ದೇ ಎಂದು ಕಿಚಾಯಿಸಿದ್ದಾರೆ.