ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸರಣಿ ಗೆದ್ದು ಪ್ರತಿಷ್ಠೆ ಉಳಿಸಿಕೊಂಡಿದೆ. ವಿಶೇಷವಾಗಿ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿದರು.ಚೇಸಿಂಗ್ ವೀರನೆಂದೇ ಹೆಗ್ಗಳಿಕೆ ಹೊಂದಿರುವ ಕೊಹ್ಲಿ, ಈ ಪಂದ್ಯದಲ್ಲೂ ಅದನ್ನು ಸಾಬೀತು ಪಡಿಸಿದರು. ತಮ್ಮ ಏಕದಿನ ಬಾಳ್ವೆಯ 28 ನೇ ಶತಕ ದಾಖಲಿಸಿದ ಕೊಹ್ಲಿ ಚೇಸಿಂಗ್ ಮಾಡುವಾಗ ಅತೀ ಹೆಚ್ಚು ಶತಕ ಗಳಿಸಿದ ತೆಂಡುಲ್ಕರ್ ದಾಖಲೆಯನ್ನು ಅಳಿಸಿದರು.