2 ವರ್ಷದಲ್ಲಿ ಒಮ್ಮೆಯೂ ಈ ವಿಚಾರದಲ್ಲಿ ಕೊಹ್ಲಿ ಮೋಸ ಮಾಡಿಲ್ವಂತೆ

ಮುಂಬೈ| Krishnaveni K| Last Modified ಶನಿವಾರ, 3 ಆಗಸ್ಟ್ 2019 (09:53 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಅವರು ತಪ್ಪಿಯೂ ತಮ್ಮ ಫಿಟ್ ನೆಸ್ ಮಂತ್ರವನ್ನು ಮುರಿಯಲ್ವಂತೆ!

 
ಹಾಗಂತ ಟೀಂ ಇಂಡಿಯಾ ಮೆಂಟಲ್ ಕಂಡೀಷನಿಂಗ್ ಕೋಚ್‍ ಶಂಕರ್ ಬಸು ಹೇಳಿಕೊಂಡಿದ್ದಾರೆ. ಕೊಹ್ಲಿ ಯಾವತ್ತೂ ತಮ್ಮ ಫಿಟ್ ನೆಸ್ ವಿಚಾರದಲ್ಲಿ ಮೋಸ ಮಾಡಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
 
‘ಫಿಟ್ ನೆಸ್ ವಿಚಾರದಲ್ಲಿ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ತಮಗೆ ತಾವು ಮೋಸ ಮಾಡಿಕೊಂಡಿಲ್ಲ. ವಿಶ್ರಾಂತಿ ತೆಗೆದುಕೊಳ್ಳಲು ನಾವೇ ಅವರಿಗೆ ಬಲವಂತ ಮಾಡಬೇಕಾಗುತ್ತದೆ. ಅವರು ಅಷ್ಟೊಂದು ತಮ್ಮ ಕರ್ತವ್ಯದಲ್ಲಿ ಗಮನಕೇಂದ್ರೀಕರಿಸಿದ್ದಾರೆ. ಅವರನ್ನೇ ತಂಡದ ಇತರ ಕ್ರಿಕೆಟಿಗರೂ ಅನುಸರಿಸುತ್ತಾರೆ’ ಎಂದು ಶಂಕರ್ ಬಸು ಹೊಗಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :