ಬೆಂಗಳೂರು: ಕರಾವಳಿಯ ಖ್ಯಾತನಾಮರೆನಿಸಿಕೊಂಡವರೂ ಇಲ್ಲಿನ ಗ್ರಾಮೀಣ ಕ್ರೀಡೆ ಬಗ್ಗೆ ಧ್ವನಿಯೆತ್ತಿದ್ದು ಕಡಿಮೆ. ಆದರೆ ದೆಹಲಿ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಂಬಳದ ಬಗ್ಗೆ ಮಾತನಾಡಿದ್ದಾರೆ. ಕಂಬಳ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ರಾಷ್ಟ್ರಪತಿಗಳ ಅಂಕಿತ ಬೀಳಲಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಸೆಹ್ವಾಗ್ ಗ್ರಾಮೀಣ ಕ್ರೀಡೆಗೆ ಉತ್ತೇಜನ ಸಿಗುತ್ತಿರುವುದು ಖುಷಿಯ ಸಂಗತಿ ಎಂದಿದ್ದಾರೆ.ಪ್ರಾಣಿ ಹಿಂಸೆ ನೆಪದಲ್ಲಿ ಈ ಗ್ರಾಮೀಣ ಕ್ರೀಡೆಯನ್ನು ನಿಷೇಧಿಸಲು ಹೊರಟಿದ್ದ