ನವದೆಹಲಿ: ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ-ಟ್ವೆಂಟಿ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದ್ದು ನೋಡಿ ಕ್ರಿಕೆಟ್ ಜಗತ್ತಿನ ದಿಗ್ಗಜರು ಮೂಕ ವಿಸ್ಮಿತರಾಗಿದ್ದಾರೆ. ಕೊನೆಯ ಓವರ್ ನಲ್ಲಿ ಕೇವಲ ಮೂರು ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದ ಬುಮ್ರಾ ಬೌಲಿಂಗ್ ನೋಡಿ ವೀರೇಂದ್ರ ಸೆಹ್ವಾಗ್ ಗೆ ಮಾತೇ ಮರೆತು ಹೋಗಿದೆಯಂತೆ. ಇದು ತಾನು ನೋಡಿದ ಅತ್ಯುತ್ತಮ ಕೊನೆಯ ಓವರ್ ಗಳಲ್ಲೊಂದು ಎಂದು ಸೆಹ್ವಾಗ್