ನವದೆಹಲಿ: ಮಾಜಿ ವಿತ್ತ ಸಚಿವ, ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ ನಿಧನರಾಗಿದ್ದಕ್ಕೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸರಣಿ ಟ್ವೀಟ್ ಮಾಡಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.ಅಷ್ಟಕ್ಕೂ ಸೆಹ್ವಾಗ್ ಗೆ ಜೇಟ್ಲಿ ನಿಧನದಿಂದ ತೀವ್ರ ದುಃಖವಾಗಲು ಕಾರಣವೂ ಇದೆ. ಸೆಹ್ವಾಗ್ ಮತ್ತು ದೆಹಲಿ ಕ್ರಿಕೆಟಿಗರಿಗೆ ಅರುಣ್ ಜೇಟ್ಲಿ ಹಲವು ರೀತಿಯಲ್ಲಿ ಸಹಾಯ ಮಾಡಿದ್ದರಂತೆ. ಹಲವು ದೆಹಲಿ ಕ್ರಿಕೆಟಿಗರಿಗೆ ಮುಂದೆ ಬರಲು ಜೇಟ್ಲಿ ಸಹಾಯ ಮಾಡಿದ್ದರು ಎಂಬ ಅಂಶವನ್ನು ಸೆಹ್ವಾಗ್