ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ರಾಷ್ಟ್ರೀಯ ತಂಡಕ್ಕೆ ಬರಲು ಯೋ ಯೋ ಫಿಟ್ನೆಸ್ ಟೆಸ್ಟ್ ಅನಿವಾರ್ಯ. ಈ ಕಠಿಣ ಪರೀಕ್ಷೆ ಪಾಸಾಗದೇ ಯಾವ ಸ್ಟಾರ್ ಆಟಗಾರನಿಗೂ ತಂಡದಲ್ಲಿ ಸ್ಥಾನ ಸಿಗಲ್ಲ.ಆದರೆ ಇದನ್ನು ಈಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಭಾರತ ತಂಡಕ್ಕೆ ಅರ್ಹತೆ ಪಡೆಯಲು ಇದುವೇ ಪ್ರಧಾನ ಮಾನದಂಡವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‘ಒಂದು ವೇಳೆ ನಮ್ಮ ಕಾಲದಲ್ಲಿ ಯೋ ಯೋ ಟೆಸ್ಟ್ ಇದ್ದಿದ್ದರೆ, ವಿವಿಎಸ್ ಲಕ್ಷ್ಮಣ್, ತೆಂಡುಲ್ಕರ್,