ಬರೋಡ: ಬರೋಡ ತಂಡದ ಪರ ರಣಜಿ ಕ್ರಿಕೆಟ್ ಆಡುವ ವಿಷ್ಣು ಸೋಲಂಕಿಗೆ ವೈಯಕ್ತಿಕ ಜೀವನದಲ್ಲಿ ಆಘಾತದ ಮೇಲೆ ಆಘಾತ. ಮೊನ್ನೆಯಷ್ಟೇ ನವಜಾತ ಮಗಳನ್ನು ಕಳೆದುಕೊಂಡಿದ್ದ ವಿಷ್ಣು ಸೋಲಂಕಿ ಈಗ ಎರಡೇ ವಾರದ ಅಂತರದಲ್ಲಿ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.ಫೆಬ್ರವರಿ 10 ರಂದು ವಿಷ್ಣು ಸೋಲಂಕಿಗೆ ಮಗಳ ಜನನವಾಗಿತ್ತು. ಆದರೆ ಮರುದಿನವೇ ಮಗಳು ಸಾವನ್ನಪ್ಪಿದ್ದಳು. ಆಗ ವಿಷ್ಣು ರಣಜಿ ಪಂದ್ಯಕ್ಕೆ ಅಣಿಯಾಗುತ್ತಿದ್ದರು. ಮಗಳನ್ನು ಮೊದಲ ಬಾರಿಗೆ ಎತ್ತಿಕೊಳ್ಳಬೇಕಿದ್ದ ವಿಷ್ಣು ಆಕೆಯ ಅಂತ್ಯ ಸಂಸ್ಕಾರ