ರಾಂಚಿ: ಟೀಂ ಇಂಡಿಯಾ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದರೂ, ಕೋಚ್ ಅನಿಲ್ ಕುಂಬ್ಳೆ ಮಾತ್ರ ತಮ್ಮ ತಂಡದ ವರ್ತನೆ ಮುಂದೆಯೂ ಹೀಗೇ ಇರಲಿದೆ. ಆಕ್ರಮಣಕಾರಿ ವರ್ತನೆಯಲ್ಲಿ ಬದಲಾವಣೆ ಮಾಡೋದಿಲ್ಲ ಎಂದಿದ್ದಾರೆ. ನಾಳೆಯಿಂದ ರಾಂಚಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇದಕ್ಕಾಗಿ ಕುಂಬ್ಳೆ ತಮ್ಮ ತಂಡವನ್ನು ತಯಾರುಗೊಳಿಸುತ್ತಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ತಮ್ಮ ಹುಡುಗರ ವರ್ತನೆ