ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ತಮ್ಮ ಆತ್ಮಚರಿತ್ರೆ ಸಿಕ್ಸ್ ಮೆಷಿನ್: ಐ ಡೋಂಟ್ ಲೈಕ್ ಕ್ರಿಕೆಟ್, ಐ ಲವ್ ಇಟ್ ನಲ್ಲಿ ತಾವು ಬ್ರಿಯಾನ್ ಲಾರಾ ದಾಖಲೆಯನ್ನು ಮುರಿಯಬಹುದೆಂದು ಲಾರಾ ಚಡಪಡಿಸಿದ ಸಂಗತಿಯನ್ನು ಬರೆದಿದ್ದಾರೆ. 2004ರಲ್ಲಿ ಲಾರಾ ಇಂಗ್ಲೆಂಡ್ ವಿರುದ್ಧ 400 ರನ್ ವೈಯಕ್ತಿಕ ಸ್ಕೋರ್ ಗಳಿಸಿ ದಾಖಲೆ ನಿರ್ಮಿಸಿದ್ದು, 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಾವು 317 ರನ್ ಗಳಿಸಿದಾಗ ಲಾರಾ ನಾನು ದಾಖಲೆ ಮುರಿಯಬಹುದೆಂದು ಭಯಪಟ್ಟಿದ್ದಾಗಿ ಗೇಲ್ ಬರೆದಿದ್ದಾರೆ.