ಮುಂಬೈ: ಮೈದಾನದಲ್ಲಿ ಆಟಗಾರರು ಸಣ್ಣ ತಪ್ಪು ಮಾಡಿದರೂ ರೇಗುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಂದೊಮ್ಮೆ ತಾವು ನಾಯಕ ಧೋನಿ ಬಳಿ ಬೈಸಿಕೊಂಡಿದ್ದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.ಧೋನಿ ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿ. ಹಾಗಿದ್ದರೂ ಅಗತ್ಯ ಬಂದಾಗ ಆಟಗಾರರ ಕಿವಿ ಹಿಂಡಿದ್ದೂ ಇದೆ. ಇಂತಹದ್ದೇ ಒಂದು ಘಟನೆಯನ್ನು ಕೊಹ್ಲಿ ಸ್ಮರಿಸಿಕೊಂಡಿದ್ದಾರೆ.2012 ರ ಏಷ್ಯಾ ಕಪ್ ಕೂಟದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿತ್ತಂತೆ. ಪಾಕಿಸ್ತಾನದ ಬ್ಯಾಟ್ಸ್ ಮನ್ ಹೊಡೆದಿದ್ದ