ರೋಹಿತ್ ಶರ್ಮಾ ಮದುವೆ ರಿಂಗ್ ಮರೆತು ಹೋದ ಗಳಿಗೆ

ಮುಂಬೈ| Krishnaveni K| Last Modified ಬುಧವಾರ, 9 ಜೂನ್ 2021 (09:11 IST)
ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಮರೆಯುವ ಕೆಟ್ಟ ಚಾಳಿಯಿದೆಯಂತೆ. ಇದರ ಬಗ್ಗೆ ಸಂದರ್ಶನವೊಂದರಲ್ಲಿ ಹಿಟ್ ಮ್ಯಾನ್ ಹೇಳಿಕೊಂಡಿದ್ದಾರೆ.

 
ಗೌರವ್ ಕಪೂರ್ ರ ಬ್ರೇಕ್ ಫಾಸ್ಟ್ ಶೋನಲ್ಲಿ ರೋಹಿತ್ ಶರ್ಮಾ ಹಿಂದೊಮ್ಮೆ ಹೋಟೆಲ್ ರೂಂನಲ್ಲಿ ವೆಡ್ಡಿಂಗ್ ರಿಂಗ್ ಮರೆತುಹೋದ ಘಟನೆಯನ್ನು ಹೇಳಿಕೊಂಡಿದ್ದಾರೆ. ಈ ಶೋನಲ್ಲಿ ರೋಹಿತ್ ಪತ್ನಿ ರಿತಿಕಾ ಕೂಡಾ ಭಾಗಿಯಾಗಿದ್ದರು. ಅವರೇ ರೋಹಿತ್ ಗೆ ಮರೆತುಬಿಡುವ ಕೆಟ್ಟ ಚಾಳಿಯಿದೆ ಎಂದು ಬಹಿರಂಗಪಡಿಸಿದರು. ಆಗ ರೋಹಿತ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
 
‘ನನಗೆ ಲೇಟಾಗಿ ಎದ್ದು ಗಡಿಬಿಡಿಯಲ್ಲಿ ಹೊರಡುವ ಚಾಳಿಯಿತ್ತು. ಹೀಗೇ ಒಮ್ಮೆ ನನ್ನ ಮದುವೆಯಾದ ಹೊಸತರಲ್ಲಿ ಟೀಂ ಹೋಟೆಲ್ ನಲ್ಲಿ ವೆಡ್ಡಿಂಗ್ ರಿಂಗ್ ಮರೆತಿದ್ದೆ. ಬಸ್ ನಲ್ಲಿ ಕುಳಿತಿದ್ದಾಗ ಪಕ್ಕದಲ್ಲಿದ್ದ ಉಮೇಶ್ ಕೈಯಲ್ಲಿದ್ದ ವೆಡ್ಡಿಂಗ್ ರಿಂಗ್ ನೋಡಿದಾಗ ನನಗೆ ನನ್ನ ರಿಂಗ್ ನೆನಪಾಯ್ತು. ಓಹ್.. ನನ್ನ ರಿಂಗ್ ಮರೆತುಹೋಯ್ತಲ್ಲಾ ಎಂದು ಹರ್ಭಜನ್ ಸಿಂಗ್ ಗೆ ವಿಷಯ ತಿಳಿಸಿದ್ದೆ. ನಿಮಗೆ ಯಾರಾದರೂ ಹೋಟೆಲ್ ನಲ್ಲಿದ್ದವರು ಗೊತ್ತಿದ್ದರೆ ನನ್ನ ರಿಂಗ್ ಹುಡುಕಿಕೊಡಿ ಎಂದು ಹೇಳಿ ಎಂದೆ. ಈ ವಿಷಯ ಕೊನೆಗೆ ಎಲ್ಲರಿಗೂ ಗೊತ್ತಾಯ್ತು. ಕೊಹ್ಲಿಯಂತೂ ಇದನ್ನು ದೊಡ್ಡ ಸುದ್ದಿ ಮಾಡಿಬಿಟ್ಟರು’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :