ಮುಂಬೈ: ಟೆಸ್ಟ್ ಸರಣಿ ಸೋತ ಬಳಿಕ ಟೀಂ ಇಂಡಿಯಾವನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ ಮಾಜಿ ಆಟಗಾರರ ವಿರುದ್ಧ ಕೋಚ್ ರವಿಶಾಸ್ತ್ರಿ ಹರಿ ಹಾಯ್ದಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದ ಬಳಿಕ ಬೀಗಿದ ರವಿಶಾಸ್ತ್ರಿ ನಮ್ಮನ್ನು ಟೀಕಿಸಿದವರೆಲ್ಲಾ ಈಗ ಎಲ್ಲಿದ್ದಾರೆ? ಸ್ವಲ್ಪ ಮುಖ ತೋರಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.ತುಂಬಾ ಜನ ಏನೇನೋ ಹೇಳಬೇಕೆಂದುಕೊಂಡಿದ್ದರು. ಎಲ್ಲಿದ್ದಾರೆ ಅವರೆಲ್ಲಾ ಈಗ? ಎಲ್ಲಾ ಎಕ್ಸ್ ಪರ್ಟ್ ಗಳು ಎಲ್ಲಿ ಹೋದರು?