ಪಲ್ಲಿಕೆಲೆ: ಟೀಂ ಇಂಡಿಯಾ ವಿರುದ್ಧ ತೃತೀಯ ಏಕದಿನ ಪಂದ್ಯವನ್ನು ಲಂಕಾ ತಂಡ ಸೋಲುತ್ತಿದೆ ಎಂದಾಗ ಅತಿಥೇಯ ತಂಡದ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಬ್ಯಾಟ್ ಮಾಡುತ್ತಿದ್ದ ಧೋನಿ ಮಾತ್ರ ಕೂಲ್ ಆಗಿ ನಿದ್ರೆ ಮಾಡುತ್ತಿದ್ದರು! ಧೋನಿ ಎಷ್ಟು ಶಾಂತ ಮೂರ್ತಿ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಇದೀಗ ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿದೆ.ಲಂಕಾ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಕೆಲವು ಕ್ಷಣಗಳ ಕಾಲ ಆಟ ಸ್ಥಗಿತಗೊಂಡಿತ್ತು. ಭದ್ರತಾ ಅಧಿಕಾರಿಗಳು