ಮುಂಬೈ: ಟೀಂ ಇಂಡಿಯಾದಲ್ಲಿ ಈಗ ಹೇಗಾಗಿದೆಯೆಂದರೆ, ಒಬ್ಬ ಹೊರ ಹೋದರೆ ಇನ್ನೊಬ್ಬ ಪ್ರತಿಭಾವಂತ ತಂಡಕ್ಕೆ ಕಾಲಿಡುತ್ತಾರೆ. ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರಿಗೆ ತಲೆ ನೋವು ತಂದಿಡುತ್ತಾರೆ. ಈಗ ಟೆಸ್ಟ್ ತಂಡದ ವಿಕೆಟ್ ಕೀಪರ್ ವಿಷಯದಲ್ಲೂ ಇದೇ ಆಗಿದೆ.ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಗಾಯಗೊಂಡು ವೃದ್ಧಿಮಾನ್ ಸಹಾ ಹೊರ ಹೋಗುತ್ತಿದ್ದಂತೆ ಅವರ ಜಾಗಕ್ಕೆ ವಿಕೆಟ್ ಕೀಪರ್ ಆಗಿ ಹಲವು ವರ್ಷಗಳ ನಂತರ ಪಾರ್ಥಿವ್ ಪಟೇಲ್ ತಂಡಕ್ಕೆ ಮರಳಿದರು. ಸಿಕ್ಕಿದ್ದೇ ಚಾನ್ಸ್