ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಸೆಹ್ವಾಗ್ ಮತ್ತು ರವಿಶಾಸ್ತ್ರಿ ಮಧ್ಯೆ ಪೈಪೋಟಿಯಿತ್ತು. ಕೊನೆಗೆ ರವಿಶಾಸ್ತ್ರಿಯೇ ಆಯ್ಕೆಯಾದರು. ಆದರೆ ಸೆಹ್ವಾಗ್ ರನ್ನು ಯಾಕೆ ಕಡೆಗಣಿಸಲಾಯಿತು ಎನ್ನುವುದಕ್ಕೆ ಕಾರಣಗಳು ಹುಟ್ಟಿಕೊಳ್ಳುತ್ತಿವೆ.ಕೋಚ್ ಆಗಲು ಸ್ವತಃ ವೀರೇಂದ್ರ ಸೆಹ್ವಾಗ್ ಗೇ ಇಷ್ಟವಿರಲಿಲ್ಲ ಎಂಬುದು ಮೊದಲ ಕಾರಣ. ಬಿಸಿಸಿಐ ಅಧಿಕಾರಿಯೊಬ್ಬರ ಒತ್ತಾಯದ ಮೇರೆಗೆ ಸೆಹ್ವಾಗ್ ಅರ್ಜಿ ಹಾಕಿದ್ದರು. ಆದರೂ ಚೆನ್ನಾಗಿಯೇ ಸಂದರ್ಶನ ನೀಡಿದ್ದ ಸೆಹ್ವಾಗ್ ಬಗ್ಗೆ ಆಯ್ಕೆಗಾರರೂ ಇಂಪ್ರೆಸ್ ಆಗಿದ್ದರು ಎನ್ನಲಾಗಿದೆ.ಆದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ