ಡರ್ಬನ್: ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಗಳಿಸಿದ ಮೇಲೆ ವಿಚಿತ್ರವಾಗಿ ಸಂಭ್ರಮಿಸಿದ್ದರು. ಅಷ್ಟಕ್ಕೂ ಕೊಹ್ಲಿ ಕಿರುಚಿ, ಹಾರಿ ಸಂಭ್ರಮಿಸುವುದು ಅಭಿಮಾನಿಗಳಿಗೇನೂ ಹಾಗಿಲ್ಲ. ಹಾಗಿದ್ದರೂ ಡರ್ಬನ್ ನಲ್ಲಿ ಡ್ರೆಸ್ಸಿಂಗ್ ರೂಂ ಕಡೆ ನೋಡಿ ಏನೋ ಹೇಳಲು ಬಯಸಿದಂತೆ ಕಾಣುತ್ತಿದ್ದರು. ಅದಕ್ಕೆ ಅವರೀಗ ಕಾರಣವೇನೆಂದು ಅವರು ಬಹಿರಂಗಪಡಿಸಿದ್ದಾರೆ.ಜೊಹಾನ್ಸ್ ಬರ್ಗ್ ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೇಲೆ ಆ ಆತ್ಮವಿಶ್ವಾಸವನ್ನು ಇಲ್ಲಿವರೆಗೆ ಕೊಂಡೊಯ್ಯಬೇಕಿತ್ತು.