ಮುಂಬೈ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾರನ್ನು ಕೈಬಿಟ್ಟಿದ್ದೇಕೆ ಎಂದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ರಹಸ್ಯ ಬಯಲಾಗಿದೆ. ಯುವರಾಜ್, ರೈನಾಗೆ ಕೊಕ್ ನೀಡಲು ಕಾರಣ ಫಿಟ್ ನೆಸ್ ಕಾರಣ ಎನ್ನಲಾಗಿದೆ. ಇವರಿಬ್ಬರಿಗೂ ಇದೇ ಕಾರಣಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಯೋ ಯೋ ಎಂಬ ಫಿಟ್ ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಯುವರಾಜ್