ಸೌರವ್ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷ ಎಂದು ಎಡವಟ್ಟು ಮಾಡಿಕೊಂಡ ವಿಕಿಪೀಡಿಯಾ

NewDelhi| Krishnaveni K| Last Modified ಸೋಮವಾರ, 23 ಜನವರಿ 2017 (12:42 IST)
ನವದೆಹಲಿ: ಸೌರವ್ ಗಂಗೂಲಿ ಅಧ್ಯಕ್ಷರಾಗಬೇಕು ಎಂದು ಸುಪ್ರೀಂ ಕೋರ್ಟ್ ಹಾಲಿ ಅಧ್ಯಕ್ಷ ಅನುರಾಗ್ ಠಾಕೂರ್ ರನ್ನು ವಜಾಗೊಳಿಸಿದ ಬಳಿಕ ಹಲವರು ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ ಜನಪ್ರಿಯ ವೆಬ್ ಸೈಟ್ ವಿಕಿಪೀಡಿಯಾ ಸೌರವ್ ಗಂಗೂಲಿಯನ್ನು ಅದ್ಯಕ್ಷ ಎಂದು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿತ್ತು. ಬಿಸಿಸಿಐ ಕುರಿತಾದ ಮಾಹಿತಿ ನೀಡುವ ಪುಟದಲ್ಲಿ ಜನವರಿ 19 ರಂದು ಇಂತಹದ್ದೊಂದು ಎಡವಟ್ಟಾಗಿತ್ತು.

ಆದರೆ ನಂತರ ಈ ತಪ್ಪು ತಿದ್ದಿಕೊಳ್ಳಲಾಗಿದೆ. ಆದರೆ ಸುಪ್ರೀಂ ಕೋರ್ಟ್ ನಿಯಮಿತ ಸಲಹಾ ಸಮಿತಿ ಸಲಹೆ ಮೇರೆಗೆ ಅದೇ ದಿನ ಬಿಸಿಸಿಐಗೆ ಉನ್ನತಾಧಿಕಾರಿಗಳ ನೆಮಕವಾಗಬೇಕಿತ್ತು. ಬಹುಶಃ ಇದೇ ಊಹೆಯ ಮೇರೆಗೆ ಗಂಗೂಲಿಯನ್ನು ಅಧ್ಯಕ್ಷರನ್ನಾಗಿಸಿರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :