ಮುಂಬೈ: ಬಿಸಿಸಿಐನ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ದಾದ ಖ್ಯಾತಿಯ ಮಾಜಿ ನಾಯಕ ಸೌರವ್ ಗಂಗೂಲಿ ಇಲ್ಲಿಯೂ ತನ್ನ ದಾದಾಗಿರಿ ಕಾರ್ಯಕ್ರಮ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.ಟೀಂ ಇಂಡಿಯಾ ನಾಯಕರಾಗಿದ್ದಾಗ ಆಕ್ರಮಣಕಾರಿ ವರ್ತನೆ, ಕಠಿಣ ನಿರ್ಧಾರಗಳಿಂದಾಗಿ ದಾದ ಎಂದೇ ಕರೆಯಿಸಿಕೊಳ್ಳುತ್ತಿದ್ದ ಗಂಗೂಲಿ ದಾದಾಗಿರಿ ಎನ್ನುವ ಟಿವಿ ಶೋ ನಡೆಸಿಕೊಡುತ್ತಾರೆ. ಆದರೆ ಬಿಸಿಸಿಐ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಬಳಿಕ ಈ ಕಾರ್ಯಕ್ರಮದಿಂದ ದೂರವುಳಿಯುತ್ತಾರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.ದಾದಾಗಿರಿ ಶೋ, ಜಾಹೀರಾತು ಒಪ್ಪಂದಗಳು ಮುಂದುವರಯಲಿವೆ.