ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ರಾಂಚಿಯ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ. ಆದರೆ ತವರಲ್ಲಿ ನಡೆಯುವ ಪಂದ್ಯಕ್ಕೆ ಧೋನಿ ಬರ್ತಾರಾ ಎಂಬುದೇ ಅಭಿಮಾನಿಗಳ ಪ್ರಶ್ನೆ.ಧೋನಿ ತಮ್ಮ ತವರಿನ ರಾಂಚಿ ಮೈದಾನಕ್ಕೆ ಆಗಾಗ್ಗೆ ಭೇಟಿ ಕೊಡುತ್ತಿರುತ್ತಾರೆ. ಅದೂ ಅಲ್ಲದೆ, ಇತ್ತೀಚೆಗೆ ಹಲವು ದಿನಗಳಿಂದ ಧೋನಿ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದಾರೆ. ಅವರ ನಿವೃತ್ತಿಯ ಮಾತೂ ಕೇಳಿಬರುತ್ತಿವೆ.ಅದರ ನಡುವೆಯೇ ಧೋನಿಯನ್ನು ಒಮ್ಮೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇದೀಗ ತವರಿನಲ್ಲೇ