ಬೆಂಗಳೂರು: ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪೈಪೋಟಿ ಪ್ರಾರಂಭವಾದ ಮೇಲೆ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಅವಕಾಶವೇ ಇಲ್ಲದಂತಾಗಿದೆ. ಆದರೆ ನಾಳೆ ನಡೆಯುವ ತವರಿನ ಪಂದ್ಯದಲ್ಲಾದರೂ ಅವರಿಗೆ ಆಡಲು ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ. ಶಿಖರ್ ಧವನ್ ಕೊನೆಯ ಎರಡು ಪಂದ್ಯಗಳಿಗೂ ಮರಳುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಇದೀಗ ಆರಂಭಿಕರಾಗಿ ಅಜಿಂಕ್ಯಾ ರೆಹಾನೆ ಮತ್ತು ರೋಹಿತ್ ಶರ್ಮಾ ಕ್ಲಿಕ್ ಆಗಿರುವುದರಿಂದ ಆರಂಭಿಕ ಸ್ಥಾನ ಸಿಗುವುದು ಡೌಟು.ಮಧ್ಯಮ ಕ್ರಮಾಂಕದಲ್ಲಿ ಕಳೆದ