ಕೋಲ್ಕೊತ್ತಾ: ಒಬ್ಬೊಬ್ಬ ಆಟಗಾರರಿಗೆ ಒಂದೊಂದು ಪ್ರಿಯವಾದ ಮೈದಾನವಿರುತ್ತದೆ. ಭಾರತದ ತಂಡದ ಆರಂಭಿಕ ರೋಹಿತ್ ಶರ್ಮಾ ವಿಚಾರದಲ್ಲಿ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನ ಮೆಚ್ಚಿನ ಮೈದಾನವೆಂದೇ ಹೇಳಬೇಕು. ಇಲ್ಲಿ ಅವರು ಗಳಿಸಿದ ರನ್ ಗಳೇ ಅವರ ಈ ಪ್ರೇಮಕ್ಕೆ ಸಾಕ್ಷಿ.ಈಡನ್ ಗಾರ್ಡನ್ ನಲ್ಲಿ ರೋಹಿತ್ ಇನಿಂಗ್ಸ್ ನ್ನು ಯಾರು ತಾನೇ ಮರೆಯಲು ಸಾಧ್ಯ? ಏಕದಿನ ಪಂದ್ಯದ ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ್ದು ಇದೇ ಮೈದಾನದಲ್ಲಿ. 2014 ರಲ್ಲಿ ಶ್ರೀಲಂಕಾ ವಿರುದ್ಧ ಇದೇ