ಸಿಡ್ನಿ: ವಿರಾಟ್ ಕೊಹ್ಲಿ ಎಂಬ ಒಂದು ಬ್ರ್ಯಾಂಡ್ ನೇಮ್ ಸಾಕು. ಅಭಿಮಾನಿಗಳು ಮೈದಾನಕ್ಕೆ ಬಂದೇ ಬರುತ್ತಾರೆ. ಆ ಪಂದ್ಯಕ್ಕೆ ಜನಪ್ರಿಯತೆ ಬಂದೇ ಬರುತ್ತದೆ. ಕೊಹ್ಲಿಯಿಲ್ಲದೇ ಹೋದರೆ ಪಂದ್ಯಕ್ಕೆ ತಾರಾಕರ್ಷಣೆ ಇರುವುದಿಲ್ಲ. ಇದು ಆಯೋಜಕರ ಹಣ ಗಳಿಕೆಗೆ ದೊಡ್ಡ ಹೊಡೆತ ತರುತ್ತದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೂ ಅದೇ ಉಭಯ ಸಂಕಟದಲ್ಲಿದೆ. ಪಿತೃತ್ವ ರಜೆ ಪಡೆದಿರುವ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದ ಮೂರು ಟೆಸ್ಟ್ ಪಂದ್ಯಗಳಿಗೆ ಗೈರು ಹಾಜರಾಗಲಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್