ಚೆಂಡು ಬಡಿದು ಕೂದಲೆಳೆಯಲ್ಲಿ ಸಾವು ತಪ್ಪಿಸಿಕೊಂಡ ವಿಂಡೀಸ್ ಕ್ರಿಕೆಟಿಗ ಆಂಡ್ರೆ ರಸೆಲ್

ಕಿಂಗ್ ಸ್ಟನ್, ಶನಿವಾರ, 14 ಸೆಪ್ಟಂಬರ್ 2019 (13:23 IST)

ಕಿಂಗ್ ಸ್ಟನ್: ವೆಸ್ಟ್ ಇಂಡೀಸ್ ನ ಪ್ರಮುಖ ಕ್ರಿಕೆಟಿಗ ಆಂಡ್ರೆ ರಸೆಲ್ ಸಿಪಿಎಲ್ ಟಿ20 ಪಂದ್ಯದ ವೇಳೆ ಭಾರೀ ಅಪಾಯದಿಂದ ಕೂದಲೆಳಯಲ್ಲಿ ಪಾರಾಗಿದ್ದಾರೆ.


 
ಸಿಪಿಎಲ್ ಪಂದ್ಯದ ವೇಳೆ ಜಮೈಕಾ ತಂಡದ ಪರ ಆಡುವ ರಸೆಲ್ ಬ್ಯಾಟಿಂಗ್ ಮಾಡುತ್ತಿರುವಾಗ ಎದುರಾಳಿ ಸೈಂಟ್ ಲೂಸಿಯಾ ತಂಡದ ಬೌಲರ್ ಹಾರ್ಡನ್ ವಿಲ್ಜೋನ್ ಎಸೆದ ಚೆಂಡು ನೇರವಾಗಿ ಬಲಗಿವಿಗೆ ತಾಕಿ ಕುಸಿದು ಬಿದ್ದಿದ್ದಾರೆ.
 
ಹೆಲ್ಮೆಟ್ ಒಳಗೆ ತೂರಿದ್ದ ಚೆಂಡು ರಸೆಲ್ ಕಿವಿಗೆ ಅಪ್ಪಳಿಸಿತ್ತು. ತಕ್ಷಣವೇ ಮೈದಾನ ಸಿಬ್ಬಂದಿ ಅವರನ್ನು ಸ್ಟ್ರೆಚರ್ ನಲ್ಲಿ ಮಲಗಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿತು. ಸ್ಕ್ಯಾನಿಂಗ್ ಮಾಡಿದ ಬಳಿಕ  ಅವರು ಗಂಭೀರ  ಅಪಾಯದಿಂದ ತಪ್ಪಿಸಿಕೊಂಡಿರುವುದು ಪತ್ತೆಯಾಯಿತು. ಈ ಘಟನೆ 2014 ರಲ್ಲಿ ಮೈದಾನದಲ್ಲಿಯೇ ಸಾವನ್ನಪ್ಪಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಫಿಲಿಪ್ ಹ್ಯೂಸ್ ಘಟನೆಯನ್ನು ನೆನಪಿಸಿತು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾಳೆಯಿಂದ ಭಾರತ-ದ.ಆಫ್ರಿಕಾ ಟಿ20: ಕೊಹ್ಲಿ-ರೋಹಿತ್ ಶರ್ಮಾ ಪೈಪೋಟಿ ಈಗ ಮೈದಾನದಲ್ಲಿ!

ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಧರ್ಮಶಾಲಾದಲ್ಲಿ ಮೊದಲ ...

news

ಅವಕಾಶ ಸಿಗಬೇಕಿದ್ದರೆ ಕೊಹ್ಲಿ ಪತ್ನಿಯ ಫ್ರೆಂಡ್ ಶಿಪ್ ಮಾಡ್ಕೋ ಎಂದು ಸೌರಾಷ್ಟ್ರ ಕ್ರಿಕೆಟಿಗನಿಗೆ ಸಲಹೆ ನೀಡಿದ ನೆಟ್ಟಿಗ!

ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದೇ ಇರುವ ಬಗ್ಗೆ ಟ್ವಿಟರ್ ನಲ್ಲಿ ಕಿಡಿ ಕಾರಿದ್ದ ಸೌರಾಷ್ಟ್ರ ...

news

ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಮರುನಾಮಕರಣ: ಭಾವುಕರಾದ ಅರುಣ್ ಜೇಟ್ಲಿ ಪತ್ನಿ

ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಇತ್ತೀಚೆಗಷ್ಟೇ ನಿಧನರಾದ ಡೆಲ್ಲಿ ಕ್ರಿಕೆಟ್ ಸಂಸ್ಥೆ ...

news

ದ.ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಸ್ಥಾನ ಕಳೆದುಕೊಂಡ ಕೆಎಲ್ ರಾಹುಲ್

ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ 15 ಸದಸ್ಯರ ಬಳಗವನ್ನು ಆಯ್ಕೆ ಸಮಿತಿ ಘೋಷಣೆ ...