Widgets Magazine

ವಿಶ್ವಕಪ್ 2019: ಅಫ್ಘಾನಿಸ್ತಾನ ವಿರುದ್ಧ ಔಟಾದ ಬಳಿಕ ಕೆಎಲ್ ರಾಹುಲ್ ಗೆ ಚೆನ್ನಾಗಿ ಬೈದಿದ್ದರಂತೆ ವಿರಾಟ್ ಕೊಹ್ಲಿ!

ಲಂಡನ್| Krishnaveni K| Last Modified ಶುಕ್ರವಾರ, 28 ಜೂನ್ 2019 (11:03 IST)
ಲಂಡನ್: ಅಫ್ಘಾನಿಸ್ತಾನ ವಿರುದ್ಧ ಕೆಎಲ್ ರಾಹುಲ್ ಕಳಪೆ ಶಾಟ್ ಹೊಡೆದು ಔಟಾದ ಬಳಿಕ ನಾಯಕ ವಿರಾಟ್ ಕೊಹ್ಲಿಯಿಂದ ಕೆಎಲ್ ರಾಹುಲ್ ಚೆನ್ನಾಗಿ ಬೈಸಿಕೊಂಡಿದ್ದರಂತೆ.

 
ಹೀಗಂತ ವಿಂಡೀಸ್ ಪಂದ್ಯದ ಬಳಿಕ ಸ್ವತಃ ರಾಹುಲ್ ಬಹಿರಂಗಪಡಿಸಿದ್ದಾರೆ. ಉತ್ತಮವಾಗಿ ಆಡುತ್ತಿರುವಾಗಲೇ ರಾಹುಲ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟಾಗುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿಯೇ ಅವರಿಗೆ ದೊಡ್ಡ ಇನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ.
 
ಆ ಪಂದ್ಯದಲ್ಲಿ ನಾವಿಬ್ಬರೂ 130-140 ರನ್ ವರೆಗೆ ಜತೆಯಾಟವಾಡಬೇಕೆಂದು ತೀರ್ಮಾನಿಸಿದ್ದೆವು. ಆದರೆ ನಾನು 30 ರನ್ ಗಳಿಸಿದಾಗ ಕೆಟ್ಟ ಹೊಡೆತ ಹೊಡೆದು ಔಟಾದೆ. ಆವತ್ತು ಪೆವಿಲಿಯನ್ ಗೆ ಮರಳಿದ ಮೇಲೆ ಕೊಹ್ಲಿ ನನಗೆ ಚೆನ್ನಾಗಿ ಬೈದಿದ್ದರು. ಉತ್ತಮ ಆರಂಭ ಪಡೆದೂ ನಾನು ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುತ್ತಿಲ್ಲ ಎನ್ನುವುದೇ ಚಿಂತೆಯ ವಿಷಯ. ಬಹುಶಃ ಮುಂದಿನ ಪಂದ್ಯಗಳಲ್ಲಿ ಆ ತಪ್ಪು ಸರಿಪಡಿಸಿಕೊಂಡು ದೊಡ್ಡ ಇನಿಂಗ್ಸ್ ಆಡುವೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :