ವಿಶ್ವಕಪ್ 2019: ನಾಯಕ ಕೊಹ್ಲಿಗೆ ಈಗ ಧೋನಿಯದ್ದೇ ಹೊಸ ತಲೆನೋವು

ಲಂಡನ್, ಮಂಗಳವಾರ, 2 ಜುಲೈ 2019 (09:31 IST)

ಲಂಡನ್: ರಲ್ಲಿ ಟೀಂ ಇಂಡಿಯಾ ಗೆಲುವಿನ ಕಡೆಗೆ ಓಡುತ್ತಿದ್ದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ತಲೆನೋವು ಶುರುವಾಗಿದೆ.


 
ಧೋನಿ ಬ್ಯಾಟಿಂಗ್ ಈಗ ಕೊಹ್ಲಿಗೆ ತಲೆನೋವಾಗಿದೆ. ಹಿರಿಯ ಅನುಭವಿ ವಿಕೆಟ್ ಕೀಪರ್ ತಂಡಕ್ಕೆ ಉಪಯುಕ್ತ ಸಲಹೆ ನೀಡುವ ಮೂಲಕ ಆಸ್ತಿಯಾಗಿದ್ದಾರೆ. ಆದರೆ ಅದೇ ಧೋನಿಯ ನಿಧಾನಗತಿಯ ಬ್ಯಾಟಿಂಗ್ ನಿಂದ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಬೇಕಾದಷ್ಟು ರನ್ ಬರುತ್ತಿಲ್ಲ ಎನ್ನುವುದು ಕೊಹ್ಲಿಯ ಚಿಂತೆಗೆ ಕಾರಣವಾಗಿದೆ.
 
ಭಾರತ ಗೆಲ್ಲುತ್ತಿದ್ದಾಗ ಧೋನಿಯ ಮೇಲಿನ ಈ ಟೀಕೆಗೆ ಮಹತ್ವ ಬಂದಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಧೋನಿಯ ಈ ಲೆಕ್ಕಾಚಾರವಿಲ್ಲದ ಬ್ಯಾಟಿಂಗ್ ನ ಕೆಟ್ಟ ಪರಿಣಾಮ ಏನಾಗುತ್ತಿದೆ ಎಂಬ ಗಂಭೀರತೆ ಕೊಹ್ಲಿಗೆ ಬಂದಿದೆ. ಹೀಗಾಗಿ ಧೋನಿ ಜತೆಗೆ ಕೂತು ಈ ಬಗ್ಗೆ ಚರ್ಚೆ ಮಾಡಿ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ಬಯಸಿದ್ದಾರೆ. ಇಂದು ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಗೆಲ್ಲಬೇಕಾದರೆ ಈ ಸಮಸ್ಯೆಗೆ ಪರಿಹಾರ ಸಿಗಲೇಬೇಕಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ನಿಂದ ಹೊರಬಿದ್ದ ವಿಜಯ್ ಶಂಕರ್, ಕನ್ನಡಿಗ ಮಯಾಂಕ್ ಅಗರ್ವಾಲ್ ಗೆ ಬಯಸದೇ ಬಂದ ಭಾಗ್ಯ!

ಲಂಡನ್: ವಿಶ್ವಕಪ್ 2019 ರಲ್ಲಿ ಟೀಂ ಇಂಡಿಯಾದಿಂದ ಮತ್ತೊಬ್ಬ ಆಟಗಾರ ವಿಜಯ್ ಶಂಕರ್ ಗಾಯದ ಕಾರಣದಿಂದ ...

news

ಸಚಿನ್ ಬಳಿಕ ಗಂಗೂಲಿಗೂ ಧೋನಿ ಮೇಲೆ ಅಸಮಾಧಾನ

ಲಂಡನ್: ಅಫ್ಘಾನಿಸ್ತಾನದ ವಿರುದ್ಧ ಧೋನಿ ಮತ್ತು ಕೇದಾರ್ ಜಾಧವ್ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ...

news

ಗೆಳತಿ ಸನಯಾಗೆ ಕ್ರಿಕೆಟಿಗ ಕರಣ್ ನಾಯರ್ ಲವ್ ಪ್ರಪೋಸ್

ಬೆಂಗಳೂರು: ಕರ್ನಾಟಕ ಮೂಲದ ಕ್ರಿಕೆಟಿಗ ಕರಣ್ ನಾಯರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗೆಳತಿ ಸನಯಾ ...

news

ಇಂದಿನಿಂದ ಎನ್ ಸಿಗೆ ರಾಹುಲ್ ದ್ರಾವಿಡ್ ಹೆಡ್ ಮಾಸ್ಟರ್

ಬೆಂಗಳೂರು: ವಾಲ್ ರಾಹುಲ್ ದ್ರಾವಿಡ್ ಇದುವರೆಗೆ ಭಾರತ ಎ ತಂಡದ ಕೋಚ್ ಆಗಿ ಹಲವು ಕ್ರಿಕೆಟಿಗರು ರಾಷ್ಟ್ರೀಯ ...