ಲಂಡನ್: ವಿಶ್ವಕಪ್ 2019 ರ ಆರಂಭದಲ್ಲಿಯೇ ಗಾಯಕ್ಕೆ ತುತ್ತಾಗಿದ್ದ ಆಲ್ ರೌಂಡರ್ ವಿಜಯ್ ಶಂಕರ್ ಇದೀಗ ಮತ್ತೆ ಗಾಯದ ಭೀತಿಗೊಳಗಾಗಿದ್ದಾರೆ. ಈಗಾಗಲೇ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾಕ್ಕೆ ವಿಜಯ್ ಶಂಕರ್ ರೂಪದಲ್ಲಿ ಮತ್ತೊಂದು ಶಾಕ್ ಸಿಗುವ ಸಾಧ್ಯತೆಯಿತ್ತು.ನೆಟ್ ಪ್ರಾಕ್ಟೀಸ್ ಮಾಡುವಾಗ ವೇಗಿ ಜಸ್ಪ್ರೀತ್ ಬುಮ್ರಾ ಯಾರ್ಕರ್ ನೇರವಾಗಿ ವಿಜಯ್ ಶಂಕರ್ ಹೆಬ್ಬರಳಿಗೆ ತಾಕಿ ಕೆಲವು ಕಾಲ ನೋವು ಅನುಭವಿಸಿದ್ದರು. ಆದರೆ ವಿಜಯ್