ಮುಂಬೈ: ಟೆಸ್ಟ್ ತಂಡದಲ್ಲಿ ರಿಷಬ್ ಪಂತ್ ಜೊತೆಗೆ ಆಡುವ ಬಳಗದ ಸ್ಥಾನಕ್ಕಾಗಿ ಪೈಪೋಟಿ ನಡೆಸುವ ವೃದ್ಧಿಮಾನ್ ಸಹಾ ತಮ್ಮ ಸಹ ಆಟಗಾರನ ಬಗ್ಗೆ ಹೇಳಿಕೆ ನೀಡಿದ್ದಾರೆ. ವೃದ್ಧಿಮಾನ್ ಸಹಾ ಆಸ್ಟ್ರೇಲಿಯಾ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದರೂ ಬಳಿಕ ಬ್ಯಾಟಿಂಗ್ ನಲ್ಲಿ ವಿಫಲರಾದ ಕಾರಣ ಆ ಸ್ಥಾನ ರಿಷಬ್ ಪಾಲಾಗಿತ್ತು. ತಂಡದಲ್ಲಿ ತಮ್ಮಿಬ್ಬರ ನಡುವಿನ ಪೈಪೋಟಿ ಬಗ್ಗೆ ಮಾತನಾಡಿರುವ ಸಹಾ ‘ನಾನು ರನ್ ಗಳಿಸಲಿಲ್ಲವೆಂಬ ಕಾರಣಕ್ಕೆ ತಂಡದಲ್ಲಿ ಸ್ಥಾನ ಕಳೆದುಕೊಂಡೆ.