ಮುಂಬೈ: ನನಗೆ ತಂಡದಲ್ಲಿ ಮಾರ್ಗದರ್ಶನ ನೀಡಲು ಇಬ್ಬರು ಮಾರ್ಗದರ್ಶಕರಿದ್ದಾರೆ ಎಂದು ಧೋನಿ ಮತ್ತು ವಿರಾಟ್ ಕೊಹ್ಲಿಗೆ ಯಜುವೇಂದ್ರ ಚಾಹಲ್ ಬೆಣ್ಣೆ ಹಚ್ಚಿದ್ದಾರೆ. ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಚಾಹಲ್ ಧೋನಿ ಮತ್ತು ಕೊಹ್ಲಿ ನನಗೆ ಯಾವತ್ತೂ ಸೂಕ್ತ ಸಲಹೆ ನೀಡುತ್ತಿರುತ್ತಾರೆ. ಅವರಿಬ್ಬರೂ ನನ್ನ ಪಾಲಿಗೆ ಬೆಳಕು ತೋರುವ ಮಾರ್ಗದರ್ಶಕರು ಎಂದಿದ್ದಾರೆ.ನಾಯಕ ಕೊಹ್ಲಿ ನನಗೆ ಗೆಳೆಯನಂತೆ ಆತ್ಮವಿಶ್ವಾಸ ತುಂಬುತ್ತಿರುತ್ತಾರೆ. ಮಹಿ ನನಗೆ ಮೆಂಟರ್ ನಂತೆ. ಸಮಸ್ಯೆ ಬಂದಾಗ ಸೂಕ್ತ ಸಲಹೆ ನೀಡುತ್ತಾರೆ.