ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳಿಗೆ ಸ್ವತಃ ಕ್ರಿಕೆಟಿಗ ಸ್ಪಷ್ಟನೆ ಕೊಟ್ಟಿದ್ದಾರೆ.ಚಾಹಲ್ ಹೊಸ ಜೀವನ ಆರಂಭಿಸುತ್ತಿರುವುದಾಗಿ ಸಂದೇಶ ಬರೆದಿದ್ದು, ಧನಶ್ರೀ ವರ್ಮಾ ಇನ್ ಸ್ಟಾ ಪುಟದಲ್ಲಿ ಚಾಹಲ್ ಹೆಸರು ಕೈ ಬಿಟ್ಟಿದ್ದು, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗೆ ಕಾರಣವಾಗಿತ್ತು.ಇದರ ಬೆನ್ನಲ್ಲೇ ಚಾಹಲ್ ಸ್ಪಷ್ಟನೆ ಕೊಟ್ಟಿದ್ದು, ‘ನಮ್ಮ ಸಂಬಂಧದ ಬಗ್ಗೆ ಕೇಳಿಬರುತ್ತಿರುವ ರೂಮರ್ ಗಳನ್ನು ನಂಬಬೇಡಿ.